ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ

ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯ ಗುರುಗಳೆಂಬರ ||

ದಾಸರಾಯನ ದಯವ ಸೂಸಿ ಪಡೆದನ
ದೋಷರಹಿತನ ಸಂತೋಷಭರಿತನ ||೧||

ಜ್ಞಾನವಂತನ ಬಲು ನಿಧಾನಿ ಶಾಂತನ
ಮಾನ್ಯವಂತನ ಬಹು ಧಾನ್ಯದಾತನ ||೨||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದ ಮರೆತನ ||೪||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು ||೫||

ಪಾಪಕೋಟಿಯ ರಾಶಿ ಲೇಪವಾಗದೋ
ತಾಪ ಕಳೆವನು ಬಲು ದಯಾಪಯೋನಿಧಿ ||೬||

ಕವನರೂಪದಿ ಹರಿಯ ಸ್ತವನ ಮಾಡಿದ
ಭುವನ ಬೇಡಿದ ಮಾಧವನ ನೋಡಿದ ||೭||

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ ||೮||

ಕಾಶಿನಗರದಲ್ಲಿದ್ದ ವ್ಯಾಸದೇವನ
ದಯವ ಸೂಸಿ ಪಡೆದನ ಉಲ್ಲಾಸತನದಲಿ ||೯||

ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ
ಶಾಂತಗುರುಗಳ ಪಾದವಾಂತು ನಂಬಿರೋ ||೧೦||

ಖೇದವಾಗದೋ ನಿಮಗೆ ಮೋದವಾಹುದೋ
ಆದಿದೇವನ ಸುಪ್ರಸಾದವಾಹುದೋ ||೧೧||

ತಾಪ ತಡೆವನೋ ಬಂದ ಪಾಪ ಕಡಿವನೋ
ಶ್ರೀಪತಿಯ ಪಾದದ ಸಮೀಪವಿಡುವನೊ ||೧೨||

ವೇದ ಓದಲು ಬರಿದೆ ವಾದ ಮಾಡಲು
ಹಾದಿ ದೊರೆಯದು ಬುಧರ ಪಾದ ನಂಬದೆ ||೧೩||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೋ ಭಕ್ತರ ಸಂಗ ದೊರಕದೆ ||೧೪||

ಲೆಕ್ಕವಿಲ್ಲದಾ ದೇಶ ಸುತ್ತಿ ಬಂದರೂ
ದುಃಖವಲ್ಲದೆ ಲೇಶ ಭಕ್ತಿ ದೊರಕದು ||೧೫||

ದಾನ ಮಾಡಲು ದಿವ್ಯಗಾನ ಪಾಡಲು
ಜ್ಞಾನ ದೊರೆಯದೋ ಇವರಧೀನವಾಗದೆ ||೧೬||

ಇಷ್ಟಿ ಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ||೧೭||

ಪೂಜೆ ಮಾಡಲು ಕಂಡ ಗೋಜು ಬೀಳಲು
ಬೀಜಮಾತಿನ ಫಲ ಸಹಜ ದೊರಕದೋ ||೧೮||

ಸುರರು ಎಲ್ಲರು ಇವರ ಕರವ ಪಿಡಿವರೋ
ತರಳರಂದದಿ ಹಿಂದೆ ತಿರುಗುತಿಪ್ಪರೋ ||೧೯||

ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವು ||೨೦||

ವ್ಯಾಧಿ ಬಾರದೋ ದೇಹಬಾಧೆ ತಟ್ಟದೋ
ಆದಿದೇವನ ಸುಪ್ರಸಾದವಾಹುದೋ ||೨೧||

ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ ||೨೨||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬೇಗ ತರಿವ ದಯದಲಿ ||೨೩||

ಮಂದಮತಿಗಳು ಇವರ ಛಂದವರಿಯದೆ
ನಿಂದೆ ಮಾಡಲು ಭವದ ಬಂಧ ತಪ್ಪದೋ ||೨೪||

ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದ ವಚನವ ನಿಜಕೆ ತಂದು ಕೊಡುವನೋ ||೨೫||

ಉದಯಕಾಲದಿ ಈ ಪದವ ಪಠಿಸಲು
ಮದಡನಾದರೂ ಜ್ಞಾನ ಉದಯವಾಹುದೋ||೨೬||

ಸಟೆಯಿದಲ್ಲವೋ ವ್ಯಾಸವಿಠಲ ಬಲ್ಲನು
ಪಠಿಸಬಹುದಿದೋ ಕೇಳಿ ಕುಟಿಲರಹಿತರು ||೨೭||

 

smarisi badukiro divya charaNakeragiro
durita toredu poreva vijaya gurugalembarA |

dAsarAyana dayava sUsi paDedanA
dOSharahitanA santOShabharitanA ||1||

jAnAvantana balu nidhAni shAntana
mAnyavantana bahuvadAnyadAtana ||2||
hariya bhajisuva narahariya yajisuva
durita tyajisuva janake haruSha surisuva ||3||
mOdabharitana paMchabhEdavaritana
sAdhucharitana manOviShAda maretana ||4||
ivara nambida janakE bhavavidembudu
havanavAgadO nammavara matavidu ||5||
pApakOTiya rAshi lEpavAgadu
tApa kalEvanu balu dayApayOnidhi ||6||
kavanarUpadi hariya stavana mADida
bhuvana bEDida mAdhavana nODida ||7||
ragganEndana bhavavu higgitEndana
maggalAggana antaraggavaritana ||8||
kAshinagaradallidda vyAsadEvana
dayava sUsi paDEdana ullAsatanadali ||9||
chintEbEDirO nishchintarAgirO
shAntagurugala pAdondu nambirO ||10||
khEdavAgadO nimage modavAhudo
Adidevana suprasAdavAhudO ||11||
tApa taDevanu banda pApa kaDivanu
shrIpatIya padasamIpaviDuvanu ||12||
veda Odalu baride vAda mADalu
hAdi doreyadu budhara pAda nanbade ||13||
gagge mindare malavu hiMgitallade
raMganoliyanu bhaktara saMga dorakade ||14||
lekkavilladA deshatukki bandarU
duHkhavallade lesha bhakti dorekadu ||15||
dAna mADalu divyagAna pADalu
jAna doreyado ivaradhInavAgade ||16||
niShThe yAtake kaMDa kaShThavyAtake
diTTa gurugala pAda muTTI bhajisiro ||17||
pUje mADalu kaNDa goju bIlalu
bIja mAtina phla sahaja dorakadu ||18||
suraru ellaru ivara karava piDivaro
taralaraMdadi hinde tirugutipparo ||19||
grahagalellavU ivarge sahAya mADuta
ahorAtrili sukhava koDuvavu ||20||
vyAdhi bArado dEhabAdhe taTTado
Adidevana suprasAdavAhudo ||21||
patitapAmara mandamatiyu nA balu
tutisalApane ivara atishayaMgala ||22||
karuNadindaliymma porevanallade
duritakoTiya bega tariva dayadali ||23||
mandamatigalu ivara chandavariyade
nindisuvaro bhavada bhanda tappado ||24||
indirApati ivara munde kuNivano
anda vachanava nijake tandu torpanu ||25||
udayakAladi I padava paThisalu
madaDanAdaru jAna udayavAhudo ||26||
saTeyidellavo vYAsaviThala ballano
paThisabahididu keli kuTilarahitaru ||27||

Leave a Reply

*

This site uses Akismet to reduce spam. Learn how your comment data is processed.