ಬಂದನೇನೇ, ಸುಂದರ ಶ್ರೀರಾಮಚಂದಿರ

ಬಂದನೇನೇ, ಸುಂದರ ಶ್ರೀರಾಮಚಂದಿರ ಬಂದನೇನೇ. ಸಿರಿವತ್ಸಧಾರನು ಶ್ರಿತಜನೋದ್ಧಾರನು, ಮಾರಸುಂದರನು ಮಾಮನೋಹರನು. ಕೋಮಲ ಗಾತ್ರನು ಕಮಲ ಕಳತ್ರನು, ಕಮಲಾಪ್ತ ತೇಜನು ವಿಮಲ ಸತ್ಪಾತ್ರನು. ಸಾಸಿರನಾಮನು ಭಾಸುರ ವದನನು, ಈಶ ವಂದಿತನು ಶೆಶ ವಿರಲನು.    

ಜಯತು ಕೋದಂಡರಾಮ ಜಯತು

ಜಯತು ಕೋದಂಡರಾಮ ಜಯತು ದಶರಥರಾಮ ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ| ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸಕಲ ಭೂತಳವ ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ |1| […]

ಗಾನಕೆ ಸುಲಭವು ರಾಮ ನಾಮವು

ಗಾನಕೆ ಸುಲಭವು ರಾಮ ನಾಮವು ಗಾನಕೆ ಅತಿಸುಲಭ ನಾಮವು ರಾಮ್ ರಾಮ್ ಜೈಜೈರಾಮ್ ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ ದೀನಜನಕೆ ಬಲು ಸಾನುರಾಗನಾದ ಜಾನಕಿನಾಥನ ದಿವ್ಯ ನಾಮವು ತಾಳ ತಂಬೂರಿ ಮೃದಂಗಗಳಿಂದಲಿ ಕೇಳುವರಿಗೆ ಅದು ಮೌಳಿಯ […]

ರಾಮ ಮಂತ್ರವ ಜಪಿಸೋ ಹೇ ಮನುಜ

ರಾಮ ಮಂತ್ರವ ಜಪಿಸೋ ಹೇ ಮನುಜ ರಾಮ ಮಂತ್ರವ ಜಪಿಸೋ ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ಸೋಮಶೇಖರ ತನ್ನ ಭಾಮೆಗ್ಹೆಳಿದ ಮಂತ್ರ ಕುಲಹೀನನಾದರು ಕೂಗಿ ಜಪಿಸೋ ಮಂತ್ರ ಸಲೆಬೀದಿಯೊಳು ಉಚ್ಚರಿಸುವ ಮಂತ್ರ […]

ಆವ ಕುಲವೋ ರಂಗಾ ಅರಿಯಲಾಗದು

ಆವ ಕುಲವೋ ರಂಗಾ ಅರಿಯಲಾಗದು || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ […]

ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರ

ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರ ಬಾಲನ ಕಂಡೀರಾ ಬಲವಂತನ ಕಂಡೀರ ಅಂಜನಿಯುದರದಿ ಪುಟ್ಟಿತು ಕೂಸು ರಾಮನ ಚರಣಕ್ಕೆರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು ಲಂಕಾ ಪುರವನೆ ಸುಟ್ಟಿತು ಕೂಸು II1II ಭಂಡಿ ಅನ್ನವನುಂಡೀತು […]

ಶ್ರೀ ಹರಿ ಭಕ್ತಿ ಸಾರ

ಶ್ರೀಯರಸ ಗಾಂಗೇಯನುತ ಕೌಂ ತೇಯ ವಂದಿತಚರಣ ಕಮಲದ ಳಾಯತಾಂಬಕರೂಪ ಚಿನ್ಮಯ ದೇವಕೀತನಯ || ರಾಯ ರಘುಕುಲವರ್ಯ ಭೂಸುರ ಪ್ರಿಯಸುರಪುರನಿಲಯ ಚೆನ್ನಿಗ ರಾಯಚತುರೋಪಾಯ ರಕ್ಷಿಸು ನಮ್ಮನನವರತ || ೧ || ದೇವದೇವ ಜಗದ್ಭರಿತ ವಸು ದೇವಸುತ ಜಗದೇಕನಾಥ […]

ಸಂಪತ್ತು ಶುಕ್ರವಾರದ ಹಾಡು

ಹರನ ಕುಮಾರನ ಚರಣಕಮಲಕ್ಕೆರಗಿ ಶಾರದೆಗೆ ವಂದಿಸುವೆ || ಶರಧಿಶಯನಗೆ ಸೆರಗೊಡ್ಡಿ ಬೇಡುವೆ ಶರಧಿ ಸುತೆಯ ಕಥೆಯೊರೆಯುವೆ || ೧ || ಸಾಕ್ಷಾತ್ ಶ್ರೀ ಹರಿವಕ್ಷಸ್ಥಳವಾಸಿಯೆ ಇಕ್ಷುಕ್ಷೇಪಣನನ್ನೆ ಪಡೆದ | ಮೋಕ್ಷದಾಯಕಳೆ ಶ್ರೀ ಲಕ್ಷ್ಮಿಯೆ ಕರುಣ ಕಟಾಕ್ಷದಿ […]

ದಾಸನ ಮಾಡಿಕೊ ಎನ್ನ ಸ್ವಾಮಿ

ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ ಕರುಣ-ಕವಚವೆನ್ನ ಹರಣಕೆ ತೊಡಿಸೊ ಚರಣಸೇವೆ ಎನಗೆ ಕೊಡಿಸೊ ಅಭಯ ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ದೃಢಭಕ್ತಿ ನಿನ್ನಲ್ಲಿ ಬೇಡಿ ನಾ […]