ದಿನಗಲನು ಕಳೇವ ಜನರೇ ಸುಜನರು

ದಿನಗಲನು ಕಳೇವ ಜನರೇ ಸುಜನರು
ವನಜನಾಭನ ದಸಜನ ಸಮಾಗಮದಿಂದ

ಅರುಣೋದಯದೊಳೆದ್ದು ಆಚಮನಕೃತ್ಯದಲಿ ಪರಿಶುದ್ಧರಾಗಿ ಇಹಪರಗಲಿಂದಾ
ಎರದುವಿಧ ಸುಖವಿವ ಗುರುಮಧ್ವಮುನಿವರರ ಪರಮ ಮಾತಾ ಪಿಡಿದು ಹರಿಚರಿತ ಅಮೃತವ ಸವಿದು

ಸ್ನಾನವನು ಸಂಕಲ್ಪ ಪೂರ್ವಕಾದಿ ಸಂಧ್ಯಾನ ಗಾಯತ್ರಿ ಗುರುಮಂತ್ರ ಜಪಿಸಿ
ಭಾನುಗಾರ್ಘ್ಯವನಿತ್ತು ಪರಮಾತ್ಮನಾಂಘ್ರಿಗಳ ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ

ಶ್ರೀ ವಾಸುದೇವನ ಅಡಿಗಡಿಗೆ ನೆನೆನೆದು ಪಾವಕಗೆ ಪ್ರಾತರ್ಆಹುತಿಯನಿಟ್ಟು
ಭಾವಜ್ಞರಲಿ ಸಕಲ ಪುರಾಣಗಳ ಕೇಳೀ ಹೂವು ಶ್ರೀ ತುಳಸಿ ಸೇವಿಸುತಾ

ಸಾವಧಾನಾದಿ ತಂತ್ರ ಸಾರ್ಓಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೇ
ನೈವೇದ್ಯಗಳನಿಟ್ಟು ನಿತ್ಯ ತೃಪ್ತಿಗೆ ವೈಶ್ವದೇವ ಬಲಿಹರನ ಅತಿಥಿ ಪೂಜೆಗಳಿಂದ

ಪರಮ ಹರುಷದಿಂದ ದೇವಪ್ರಸದಾವನು ವರ ಮಾತೃ ಪಿತೃ ಸೋದರರು ಸಹಿತಾ
ಪರಮ ಸೌಖ್ಯದಿ ಪಂಕ್ತಿ ಪಾವನರ ಒದಗೋಡಿ ನರಹರೇ ಎನುತ ಭೋಜನಮಾಡಿ ಮುದದಿಂದ

ಸಯಾಹ್ನದಾಲಿ ಸಂಧ್ಯಾನಾ ಗಾಯತ್ರಿ ಜಪ ಶ್ರೀಯರಸನಾಂಘ್ರಿಗಳ ಪೂಜೆಯನು ಮಾಡಿ
ವಾಯುಸಖ ಮುಖದಲಾಹುತಿಯಿಟ್ಟು ಲಕ್ಷ್ಮಿ ನಾರಾಯಣನ ಗಾಯನದಿ ಕೊಂಡಾಡಿ ಪೊಗಲುಟ್ಟಲಿ

ಈ ವಿಧದಿ ದಿನಗಲನು ಕಳೆದು ರಾತ್ರಿಯಲೊಂದು ಝಾವದನಾಂತರ ಸುಖದಿ ಮಲಗಿ
ಝಾವ ಝಾವದೊಳೆದ್ದು ನೆರೆಹೊರೆಯು ಕೇಳುವಂತೆ ಪಾವನ ಚರಿತ ಹಯವದನನ್ನ ಸ್ಮರಿಸುತ್ತ ||

Leave a Reply

*

This site uses Akismet to reduce spam. Learn how your comment data is processed.