ನಾರಾಯಣನ ನೆನೆ ಮನವೇ

ನಾರಾಯಣನ ನೆನೆ | ಮನವೇ | ನಾರಾಯಣನ ನೆನೆ || ಪ ||

ನಾರಾಯಣನ ಮನ್ನಿಸು ವರ್ಣಿಸು ಆರಾಧನೆಗಳ ಮಾಡುತ ಪಾಡುತ |
ನೀರಾಜನದಿಂದ ಅರ್ಚಿಸು ಮೆಚ್ಚಿಸು ಪಾರಾಯಣ ಪ್ರಿಯನ |
ವೇದ | ಪಾರಾಯಣ ಪ್ರಿಯನ || ಅ. ಪ ||

ಅವನ ಶ್ರಾವಣ ಮನಾನಾ ನಿಧಿಧ್ಯಾಸನ |
ಆ ವಿಷ್ಣುವಿನ ಭಕ್ತಿ ಮಹಾ ಪ್ರಸಾಧನಗಳು |
ಕೈವಲ್ಯಪದಕ್ಕೆ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರು
| ದೇವಾ | ಭಾವಜ್ಞರು ಪೇಳ್ವರು ||
ಜೀವನ ಜವಾನ ಬಾಧೆಗಳನ್ನುತಪ್ಪಿಸಿ |
ಪಾವನ ವೈಕುಂಠ ಪುರದೊಳಗೆಂದೆಂದೂ |
ಆವಾಸವ ಮಾಡಿ ಸುಖಿಸ ಬೇಕಾದರೆ |
ಸೇವಿಸು ವೈಷ್ಣವರ | ನೀ | ಸೇವಿಸು ವೈಷ್ಣವರ || 1 ||

ದ್ವಾರಾವತಿಯ ಗೋಪಿ ಚಂದನದಿಂದ | ಶ್ರೀರಮಣನ ವಾರ
ನಾಮವಾಸಿ ನೆನೆದೆರೆಡಾರು | ಊರ್ಧ್ವ ಪುಂಡ್ರಾನ್ಗಳ ಧರಿಸೆಂದು |
ವೀರ ವೈಷ್ಣವ ಗುರುವ | ವೀರ ವೈಷ್ಣವ ಗುರುವ ||
ಸೇರಿ ಸಂತಪ್ತ ಸುದರುಶನ ಶಂಖವ |
ಧಾರಣವನು ಭುಜಯುಗದೊಳು ಮಾಡಿ ||
ಮುರಾರಿಯಾ ಮಂತ್ರಗಳವರಿಂದಲೇ ಕೇಳಿ |
ಓರಂತೆ ಜಪಿಸುತ್ತಿರು | ನೀ | ಓರಂತೆ ಜಪಿಸುತ್ತಿರು || 2 ||

ಕಂದ ಬಾರೆಂದರೆ ನಂದನಗೊಲಿದಿಹ |
ಕುಂದು ಕೊರತೆ ಬಂದರೆ ನೊಂದುಕೊಳ್ಳಲು ||
ಇಂದಿರೆಯರಸ ಮುಕುಂದನೇ ಮುಕುತಿ ಆನಂದವನಿವ ದೇವಾ |
ಆನಂದವನಿವದೇವ || ಸಂದೇಹ ವಿಲ್ಲದೆ ಒಂದೇ ಮನದಿಗೋ -|
ವಿಂದನ ನೆನೆವ ಗಜೇಂದ್ರನಿಗೊಲಿದ | ಉ- |
ಪೇಂದ್ರನ ಶುಭಗುಣ ಸಾಂದ್ರನ ಯದುಕುಲ
ಚಂದ್ರನ ವಂದಿಸಿರೋ |
ಯದುಕುಲ ಚಂದ್ರನ ವಂದಿಸಿರೋ || 3 ||

ತುಷ್ಟನಹುದೋ ಎಳ್ಳಷ್ಟೂ ಮುಂದಿಟ್ಟರೆ |
ಅಷ್ಟಿಷ್ಟೆಂನಾದೆ ಸಕಲೇಷ್ಟನ್ಗಳ ||
ಕೊಟ್ಟು ಕಾವನು ಶಕ್ರನಿಗೆ ತ್ರಿವಿಷ್ಟಪೇ ಪಟ್ಟಗಟ್ಟಿದವ |
ತ್ರಿವಿಷ್ಟಪೇ ಪಟ್ಟಗಟ್ಟಿದವ ||
ನಿಷ್ಠುರನಲ್ಲ ವಿಶಿಷ್ಠರಿಗೊಲಿದಿಹ |
ದುಷ್ಟರ ತರಿದಟ್ಟಿದ ಜಗಜತ್ತ್ ||
ಅರಿಷ್ಟ ಮುಷ್ಟಿಕಾದ್ಯರ ಹುಡಿಗಟ್ಟಿದ ವಿಥಿತಾಳ ಬಾಳುಧಿತ್ತ |
ನಮ್ಮ ವಿಥಿತಾಳ ಬಾಳುಧಿತ್ತ || 4 ||

ಅವನ ಪಕ್ಷ ಬಲಕ್ಕಿದಿರಿಲ್ಲಕೆ -|
ಲಾವಣಿ ಕುಕ್ಷಿಯೊಳಕ್ಕೂ ಜಗತ್ರಯ ||
ಅವನು ರಕ್ಷಿಪ ಶಿಕ್ಷಿಪನೋ ಮ – |
ಟ್ಟಾವನು ಪಾವನನೊ , ಮತ್ತಾವನು ಪಾವನನೊ ||
ಅವನ ಶಿಕ್ಷೆಗೆ ಮಿಕ್ಕವರಿಲ್ಲ ಕೆ -|
ಲಾವನು ಪೇಕ್ಷೆಗೆ ಕುಲಕ್ಷಯ ವೆನಿಪುದು ||
ಅವನೂರುಕ್ರಮ ತ್ರಿವಿಕ್ರಮ ನೆನಿಸಿದಾ |
ದೇವನಿಗಾವಗೇನೇ | ನಮ್ಮ | ದೇವಣಿ ಗಾವಾಗೆನೆ || 5 ||

ಓದುವ ಆಡುವ ದೇವರೇ ಬಲ್ಲರು |
ಕೂಡುವ ನೋಡುವ ಮುಕುತ್ತಾರೆ ಬಲ್ಲರು ||
ಬೇಡುವ ಮುನಿಗಳು ಬಲ್ಲರು |
ಅವನೊಡನಾಡುವ ರಾಮ್ ತಾ ಬಲ್ಲಳು ||
ಓದುವ ಪಾಡುವ ಯಶೋದೆ ಬಲ್ಲಳು |
ಕಾಡುವ ಖೂಳರ ಆಡುತಾ ಕೆಡಹಿದ |
ನಾಡೊಲು ಶರಣರ ಕೀಳು ಕಳೆದ ಕೃಷ್ಣಾ ||
ಗೀದೆನ್ನದಿರು ಮೂಢ | ಇವ ಗೀದೆನ್ನದಿರು ಮೂಢ ||6||

ಹರಿ ನಿರ್ಮಾಲ್ಯವ ಶಿರಡಿ ಧರಿಸುತ್ತಿರು |
ಹರಿ ನೈವೇದ್ಯವ ಭುಂಜಿಸುತ್ತಿರು ನಿತ್ಯ ||
ಹಗಲು ಇರುಳು ಹರಿ ಸ್ಮರಣೆಯ ಬಿಡದಿರು |
ದುರುಳರ ಕೂಡದಿರು | ನೀ | ದುರುಳರ ಕೂಡದಿರು ||
ಹರಿ ಪರ ತೀರಥ್ ನೇಮವ ಬಿಡದಿರು |
ಹರಿ ಪರ ದೇವತೆ ಯಾಂದುಸುರುತಲಿರು ||
ಗುರು ಮುಖದಿಂದ ಸಚ್ಛಅಸ್ತ್ರ ಪುರಾಣವ |
ನಿರುತದಿ ಕೇಳುತಿರು | ನೀ | ನಿರುತದಿ ಕೇಳುತಿರು || 7 ||

ಸಿರಿದೇವಿಯು ಯಾವನಿ ಗರಸಿಯು ಸುರಾ |
ಗುರು ವಿರಿಂಚಿಪರು ಅವನ ಕುಮಾರರು |
ಉರಗಾಧಿಪಗಾವನ ಮಂಚ ವಿಹಾಗೆ -| ಶ್ವರಗಾವನ ವಾಹನ ||
ಪುರಹರ ನಾವನುಂಗುತ ನೀರ ಪುಟ್ಟ |
ನಿರ್ಜರ ಪಾಠಿಯಾವಾನಾ ಚಾರಣ ಸೇವಕನಾದ ||
ಸುರರೊಳಗಾ ಹಾಯವಾದನಗಿನ್ನಾರು |
ಸರಿಎಂದುಸುರುವೆನಯ್ಯ | ಸರಿಎಂದುಸುರುವೆನಯ್ಯ || 8 ||

Naaraayanana nene | manave | naaraayanana nene || pa ||

Naaraayanana mannisu varnisu aaraadhanegala maaduta paaduta |
Neeraajanadinda archisu mecchisu paaraayana priyana |
Veda | paarayana priyana || a.pa ||

Avana shravana manana nidhidhyaasana |
Aa vishnuvina bhakti mahaa prasaadangalu |
Kaivalyapadakikkida nicchanike endu bhaavaj~jaru pelvaru
| deva | bhaavaj~jaru pelvaru ||
Jeevana javana baadhegalannutappisi |
Paavana puradolagendigu |
Aavaasava maadi sukhisa bekaadare |
Sevisu vaishnavara | nee | sevisu vaishnavara || 1 ||

Dwaaraavatiya gopi chandanadinda | shreeramanana vara
Naamava nenedare |
Eradaaru oordhwa pundrangala dharisendu |
Veera vaishnava guruva | nee | veera vaishnava guruva ||
Seri samtapta sudarushana shamkhava |
Dhaaranavanu bhujayugadolu maadi ||
Muraariya mantragalavarindale keli |
Orante japisutiru | nee | Orante japisutiru || 2 ||

Kanda baarendare nandanigolidu |
Kundu korate bandare nondu kollanu ||
Indireyarasa mukundane mukuti aanandavaniva deva |
Aanandavanivadeva || sandeha villade onde manadigo-|
Vindana neneva gajendranigolida | u- |
Pendrana shubhaguna saandrana yadukula
Chandrana vandisiro |
Yadukula chandrana vandisiro || 3 ||

Tushtanahudo ellashtu mundittare |
Ashtishtennade sakaleshtangala ||
Kottu kaavanu shakranige trivishtapa pattavagattidava|
Trivishtapa pattavagattidava ||
Nishturanalla vishishtharigolidiha |
Dushtara taridattida jagajatti ||
Arishta mushtikaadyara hudigattida viththala baludhitta |
Namma viththala baludhitta || 4 ||

Avana paksha balakkidirillake-|
Laavana kukshiyolakku jagatraya ||
Avanu rakshipa shikshipano ma- |
Ttaavanu paavanano, mattaavanu paavanano ||
Avana shikshege mikkavarilla ke-|
Laavanu pekshege kulakshaya venipudu ||
Avanurukrama trivikrama nenisidaa |
Devanigaavagene | namma | devani gaavagene || 5 ||

Oduva aaduva devare ballaru |
Kooduva noduva mukutare ballaru ||
Beduva munigalu ballaru |
Avanodanaaduva rame taa ballalu ||
Ooduva paaduva yashode ballalu |
Kaaduva khoolara aaduta kedahida |
Naadolu sharanara keelu kaleda krushna ||
Geedennadiru moodha | iva geedennadiru moodha ||6||

Hari nirmaalyava shiradi dharisutiru |
Hari naivedyava bhunjisutiru nitya ||
Hagalu irulu hari smaraneya bidadiru |
Durulara koodadiru | nee | durulara koodadiru ||
Hari para teeratha nemava bidadiru |
Hari para devate yamdusurutaliru ||
Guru mukhadinda saccaastra puraanava |
Nirutadi kelutiru | nee | nirutadi kelutiru || 7 ||

Sirideviyu yaavani garasiyu sura |
Guru virinchiparu avana kumaararu |
Uragaadhipagaavana manca vihage-| shwaragaavana
Vaahana ||
Purahara naavanunguta neera potta |
Nirjara patiyaavana charana sevakanaada ||
Surarolagaa hayavadanaginnaaru |
Sariyendusuruvenayya | sariyendusuruvenayya || 8 ||

 

ನಿಮ್ಮದೊಂದು ಉತ್ತರ

*

This site uses Akismet to reduce spam. Learn how your comment data is processed.