ಘಟಿಕಾ ಚಲದಿ ನಿಂತ

ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ
ಘಟಿಕಾ ಚಲದಿ ನಿಂತಾ
ಘಟಿಕಾ ಚಲದಿ ನಿಂತಾ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೋರೆವೆನೆಂದು

ಚತುರಯಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚತುರ್ಮುಖನಾಗಿ ಜಗಕೆ ಚತುವಿ೯ದ ಫಲವಕೊಡುತ

ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಸನದಿ ಕರೆದು ವರಗಳ ಕೊಡುತ

ಶಂಖಚಕ್ರವಧರಿಸಿ ಭಕ್ತರ ಮನ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ

ನಿಮ್ಮದೊಂದು ಉತ್ತರ

*

This site uses Akismet to reduce spam. Learn how your comment data is processed.