ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ

ರಾಗ: ನಾಡನಾಮಕ್ರಿಯ
Aa:S R1 G3 M1 P D1 N3
Av: N3 D1 P M1 G3 R1 S N3

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ.||

ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ
ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ||೧||

ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿ
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ ||೨||

ಕಾಮಕ್ರೋಧವ ಅಳಿದವರಾಗಿ ನೇಮನಿತ್ಯವ ಮಾಡುವರಾಗಿ
ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ ||೩||

ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆದರೆ ಭವವನು ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿ ||೪||

rAgi taMdIrA bhikShake rAgi taMdIrA
yOgyarAgi bhOgyarAgi bhAgyavaMtarAgi nIvu ||pa.||

annadAnava mADuvarAgi annaChatravaniTTavarAgi
anyavArteya biTTavarAgi anudina bhajaneya mADuvarAgi ||1||

mAtApitaranu sEviparAgi pApakarmava biTTavarAgi
rItiya bALanu bALuvarAgi nItimArgadali khyAtarAgi ||2||

kAmakrOdhava aLidavarAgi nEmanityava mADuvarAgi
rAmanAmava japisuvarAgi prEmadi kuNikuNidADuvarAgi ||3||

siriramaNana dina neneyuvarAgi gurutige bAhOraMthavarAgi
karedare bhavavanu nIguvarAgi puraMdara viThalana sEviparAgi ||4||

Leave a Reply

*

This site uses Akismet to reduce spam. Learn how your comment data is processed.