ಬಾರಯ್ಯ ಬಾ ಬಾ ಬಾರೋ ಭಕುತರ

ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರ ಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||

ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ||

ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ
ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕನ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||

ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ
ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ
ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯು ಮಹೋ ಉರಗಗಿರಿವಾಸ ||೨||

ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ
ಗೋಪಾಲ ವಿಠ್ಠಲ ದೇವ ಪರಾಖು
ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ
ಮಡದಿಗೆ ಹೇಳದೆ ದುಡುದುಡುನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||

______________________________

varijalayapati varijanabhane
varijabhavapita varijanetrane
varijamitra aparaprabhavane
varija jhandada karana doreye

baraiyya ba ba bakutara priya Srinivasa raya
mara janaka mukutharodeya devaiyya jiya baraiyya ba ba ba ba ba

Syandana veribappa ranga devotunga
nandanadanarimada bhanga karuna panga
sindhu shayana sundaranga he Narasingha
kanda virinchiyu nandivahana amarendra
sanakana sanandanadi munivrindanidu
bandu nindu dim dim dimikendu
nindadalu Anadadi manake

baraiyya ba ba ba ba ba ba ba ba ba bakutara priya Srinivasa raya

jagat janmmadi karta govinda udaradi lokava
laguvagi darisida mukunda bhaktara manake
jaga jagaisuta polevananda nigamavaliyinda

aganita munigalu naga kaga mriga shashi
gagana manyAdyaru sogasagi bhage bhage
pogalutali bega chigichigidadalu
mugulunageyu maha uragagirivasa

baraiyya ba ba ba ba ba bakutara priya Srinivasa raya

tadamada byadavo he nalla vaku lalisuennodeya
Gopala vittalaa deva paraku
adi idu bhaktavatsala shri lakuminalla
maduvinolage gaja moreyidalakshane
madadige hellade dudududune bandu
hididu nakrana baya kadidu bidisidane
sadagaradali ramepodaveyodagude

baraiyya ba ba ba ba ba bakutara priya Srinivasa raya

2 comments

Leave a Reply

*

This site uses Akismet to reduce spam. Learn how your comment data is processed.