Entha Shrimantha

ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||

ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

Thanks to Ajith Kulkarni for posting the lyrics.

2 comments

Please send me the lyrics of song Entha Shrimanthananthano song by Prasanna Venkata dasaru in Kannada

ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||

ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

ಸ್ಥೂಲಾರ್ಥ : ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ = ಶ್ರೀಹರಿಯು ಎಂಥಾ ಮಹಿಮೆಯುಳ್ಳವನೆಂದು ದಾಸರು ವರ್ಣಿಸಲಾರಂಭಿಸುತ್ತಾರೆ ಎಂಥಾ ಶ್ರೀಮಂತನು, ಅನಂತನಾದ ಶ್ರೀರಮಾ ರಮಣನು

ಬೊಮ್ಮನು ಹೆಮ್ಮಗ ಮೊಮ್ಮಮೃಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||

ಅರ್ಥ : ಬೊಮ್ಮನು ಹೆಮ್ಮಗ = ಚತುರ್ಮುಖ ಬ್ರಹ್ಮನು ಹಿರಿಯಮಗ, ಸೃಷ್ಟಿಯಾದಿಯಲ್ಲಿ ಪರಮಾತ್ಮನ ಕಮಲನಾಭದಿಂದ ಹೊರಹೊಮ್ಮಿದ ಚೊಚ್ಚಲ ಮಗ ಹಿರಿಯಚೇತನರಲ್ಲಿ ಹಿರಿಯನಾದ ಬ್ರಹ್ಮ, ಮೊಮ್ಮಮೃಢ : ಚತುರ್ಮುಖನ ಮಗನಾಗಿ ರುದ್ರನ ಹುಟ್ಟು, ಅದಕ್ಕೆ ರುದ್ರನ ಅಜ್ಜ ಹರಿ, ರುದ್ರ ಹರಿಗೆ ಮೊಮ್ಮಗ, ಮರಿಮೊಮ್ಮಗಶಣ್ಯಶಿರ : ರುದ್ರನ ಮಗನಾದ ಷಣ್ಮುಖ (ಷಟ್+ಶಿರ) ಮೊಮ್ಮಗನ ಮಗ = ಮರಿಮೊಮ್ಮಗ, ಪರಮ್ಮ = ಪರಮ ಉತ್ಕೃಷ್ಟನಾದವ, ಅಮ್ಮರಸಮ್ಮೋಹ = ಅಮರ ಸಮೂಹ, ಶಬ್ಧ ಆಡುಭಾಷೆಗಳಿಗನುಗುಣವಾಗಿ ದಾಸರು ಅಮ್ಮರಸಮ್ಮೋಹ ಎಂಬ ತದ್ಭವರೂಪದ ಛಾಯೆಯಲ್ಲಿ ಹೇಳಿದ್ದಾರೆ, ನಿಮ್ಮಣುಗಮ್ಮರು = ಈ ಅಮರ ಸಮೂಹವು ನಿನ್ನ ಅಣುಗರು = ನಿನ್ನ ಸೇವಕರು, ಅಮ್ಮರು = ಎನ್ನುವರು, ಅಂಥವನಾದ ನಿನಗೆ… ನಮ್ಮೊ ಪರಮ್ಮೊ ಮಹಮ್ಮ = ನಮೋ ನಮ್ಮೆಲ್ಲರ ಪರಮ ಮಹಿಮನಾದವನೆ

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಹಂಗಳ ಹಿಂಗಿಪಳಾಂಗಾ ||

ಅರ್ಥ : ಅಂಬು+ರುಹ = ನೀರಿನಲ್ಲಿರುವ ಗಿಡ = ಕಮಲ ಅಂಗ = ಶರೀರ = ಕಮಲದಲ್ಲಿ ಬಂದಂಥಾ ಶರೀರ = ಬ್ರಹ್ಮ, ಅಂಗ = ದೇಹ, ಒಟ್ಟಾರೆ ಬ್ರಹ್ಮಾಂಡ, ಅನಂತಗತ = ಇಂತಹ ಬ್ರಹ್ಮಾಂಡಳು ಅನಂತಗತ, ಅಸಂಖ್ಯಾಕವಾಗಿರುವ ಬ್ರಹ್ಮಾಂಡಕ್ಕೆ ಮಂಗಳಾಂಗ = ಮಂಗಳ ಸ್ವರೂಪಿಯಾದ ಹರಿ, ವಿಶ್ವಂಗಳ ಮಂಗಳ = ಸೃಷ್ಟಿಸಿದ ವಿಶ್ವಕ್ಕೆ ಮಂಗಳವನ್ನೀಯಲೋಸುಗ, ಸಿಂಗರದುಂಗುಟ = ಶೃಂಗಾರವಾದ ಅಂಗುಟ = ಉಂಗುಟ, ಶ್ರೀಹರಿಯ ಪಾದದ ಅಂಗುಟಾಗ್ರವು ಶ್ರೀಹರಿಯ ಸ್ವರೂಪವೇ ಆಗಿದೆ. ಅದರ ಸಂಗದ = ಸ್ಪರ್ಶದಿಂದ, ಗಂಗಜ = ಗಂಗಾ ನದಿಯು ಹುಟ್ಟಿತು, ಕಂಗಳಘಂಗಳ = ಗಂಗೆಯ ದೃಷ್ಟಿಯು ಇಹದಲ್ಲಿ ಭಕ್ತರ ಅಘ ಹಿಂಗಿಸುವಳಾಗಿರುವಳು.

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾರ್ಣ
ಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||

ಅರ್ಥ : ಪನ್ನಗಪನ್ನಶಯನ್ನ = ಸರ್ಪವನ್ನು ಹಾಸಿಗೆಮಾಡಿಕೊಂಡವ, ಮಹೋನ್ನತ ಪನ್ನಗವರವಾಹನ್ನ = ಮಹತ್ತರವಾದ ಪನ್ನಗವರ = ಸರ್ಪಕ್ಕಿಂತ ಶ್ರೇಷ್ಟನಾದ ಗರುಡವಾಹನ್ನ, ರತುನ್ನ = ಗುಣಗಳ ರಾಶಿ, ರತ್ನ, ಭವಾರ್ಣ
ಸುಖೋನ್ನತ = ಭವವೆಂಬ ಸಾಗರಕ್ಕೆ ಉನ್ನತವಾದ ಸುಖವೀವ, ರನ್ನಗ ರನ್ನಿಜ = ವಿಶೇಷ ರತ್ನ = ಕಾಂತಿಯನ್ನು ಕೊಡುವವ ರನ್ನಗ, ಅಂಧಕಾರ ಕಳೆಯುವ ಕಾಂತಿ ನೀಡುವವ ರನ್ನಿಜ = ಇಂಥಾ ನೀನಿರುವಾಗ ಇನ್ನ್ಯಾರು ಒಡೆಯನಾಗಲು ಸಾಧ್ಯ.

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||

ಅರ್ಥ : ಬಲ್ಲ ಕೈವಲ್ಯಜ್ಞರ ವಲ್ಲಭ = ಜ್ಞಾನಿಗಳ, ಮೋಕ್ಷಕ್ಕೆ ಅರ್ಹರಾದವರ ವಲ್ಲಭ, ದೊರೆಯಾದ ಹರಿ, ಸುಲ್ಲಭ = ಹರಿಯ ಅರಿತವರಿಗೆ ಸುಲಭ, ಬಲ್ಲಿದ ಖುಲ್ಲರ ದಲ್ಲಣನಲ್ಲದೆ = ಬಲ್ಲಿದ = ವಲಿಷ್ಠ ಹರಿಯು, ಖುಲ್ಲರ = ದೈತ್ಯರ (ತನ್ಮೂಲಕ ಸಾಧನೆಗೆ ಶತ್ರುಗಳಾದ ಅರಿಷಡ್ವರ್ಗಗಳನ್ನೂ ಕೂಡ) ಎದೆಯನ್ನು ದಲ್ಲಣ = ನಡುಗಿಸುವ ಸಾಹಸಿ, ಒಬ್ಬನೆ ಧೈರ್ಯವಂತ ಜಗದಲಿ. ಹುಲ್ಲದು ನಿನ್ನೊಳವಲ್ಲ ನಿನ್ನಲ್ಲದೆ = ಆ ಧೈರ್ಯವು ಹರಿಗಲ್ಲದೆ, ಹುಲು ಜೀವರಿಗೆ ಆಗುತ್ತದೆಯೊ?

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

ಅರ್ಥ : ಪ್ರಳಯಕಾಲದಲ್ಲಿನ ಹರಿ ಮಹಿಮೆಯನ್ನು ಇಲ್ಲಿ ಹೇಳಿದ್ದಾರೆ. ಅಂಬರದುಂಬಿಗೆತುಂಬೆ = ಇಡೀ ವಿಶ್ವವು (ಅಂಬರವನ್ನು ವಿಶ್ವಕ್ಕೆ ಹೋಲಿಸಿ) ತುಂಬಿತುಂಬೆ = ಪ್ರಳಯಜಲಧಿಯಲ್ಲಿ ತುಂಬಿ ತುಳುಕಾಡಿದಾಗ, ವಿಶ್ವಮ್ = ಈ ಬ್ರಹ್ಮಾಂಡವನ್ನು ಬಸುರದಿ = ಹರಿಯು ಗರ್ಭದಲ್ಲಿ, ಇಟ್ಟುಕೊಂಬ ಕೃಪಾನಿಧೇ = ಆಶ್ರಯ (ಇಂಬು), ಬ್ರಹ್ಮಾಂಡಕ್ಕೆ ಆಶ್ರಯವನ್ನು, ಗರ್ಭದಲ್ಲಿ ಹುದುಗಿಟ್ಟುಕಲ್ಳುವಬು, ಇಂತಹ ವ್ಯಾಪಾರವು ಅತ್ಯಂತ ದಯಾಳುವಾದವನಿಗೆ ಉಂಟು, ಕೃಪಾ ಸಾಗರನಾದ ಹರಿಯೇ ಆತನು, ಇಂಬಕದಂಬಕ = ಇಂಬ = ಆಶ್ರಯ, ಕದಂಬಕ = ಸಮೂಹ, ಸಕಲ ಜೀವ ಸಮೂಹಕ್ಕೆ ಆಶ್ರಯನಾಗಿ ಅಲ್ಲದೆ ಬಿಂಬನಾಗಿ ಇರುವವ, ಬಿಂಬ ಪ್ರಸನ್ವೇಂಕಟ = ಬಿಂಬ ಸ್ವರೂಪಿಯಾಗಿರುವ ದಾಸರ ಬಿಂಬರೂಪಿಯೂ ಆದ ಪ್ರಸನ್ವೇಂಕಟನು ನಂಬಿದ ಬಿಂಬನಿವನೆಂಬ = ಶ್ರದ್ಧೆಯಿಂದ ನಂಬಿದವರಿಗೆ ಬಿಂಬನಂತೆ = ಅತ್ಯಂತ ಸಮೀಪದಲ್ಲಿರುವ ಎಂಬ ವಿಚಾರವನ್ನು ಮನಗಾಣಿಸಿ ವಿಶ್ವ ಕುಟುಂಬಿಯೆಂಬ ಪಾತ್ರವನ್ನು ಆಪ್ತರಿಗೆ ಪರಿಚಯಿಸಿಕೊಡುವನು. ಅಪರೋಕ್ಷ ಜ್ಞಾನವನ್ನಿತ್ತು ರಕ್ಷಿಸುವನು ಎಂಬ ತಾತ್ಪರ್ಯ.

Leave a Reply

*

This site uses Akismet to reduce spam. Learn how your comment data is processed.