ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ

ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ
ಸಾಲಿಗ್ರಾಮಕೆ ಹಾಲಭಿಷೇಕ ಕೋಲಣ್ಣ ಕೋಲ, ಕೋಲಣ್ಣ ಕೋಲ||ಕೋಲು||

ಅಟ್ಟದ ಮೇಲಿನ ನೆಲವಲ್ಲಾಡಿಸಿ ಸಕ್ಕರೆಗಳ ಸವಿದಾ
ಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ
ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ
ಮಕ್ಕಳು ಮಲಗ್ಯಾರೆಬ್ಬಿಸಬೇಡೆನೆ ಬಟ್ಟಲು ಬಾರಿಸಿದಾ||2| ||ಕೋಲು||

ಹಪ್ಪಳ ಸಂಡಿಗೆ ಹರವಿದ ಮನೆಯಲಿ ತಪ್ಪದೆ ತಾ ಪೋದ
ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ
ಸಾರಿದ ಮನೆಯಲಿ ಸುಣ್ಣವ ಚೆಲ್ಲಿ ಧೂಳನು ಹರವಿದಾ
ಕಾಲಲಿ ರಂಗೋಲಿ ಹಾಕಿದೆ ಯಶೋದೆ ನೋಡು ಬಾ ಎಂದು ಕರೆದಾ||2|| ||ಕೋಲು||

ಅಭಿಷೇಕಕೆಂದು ಅಘ್ರ್ಯೋದಕ ತಂದರೆ ಅಚಮನ ಮಾಡಿದಾ
ಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆ ಶ್ರೀತುಳಸಿಯ ತಾ ಮುಡಿದ
ನೈವೇದ್ಯಕೆಂದು ಅಮ್ರತಾನ್ನ‌ಮಾಡಲು ಬಾಯ್ತೆರೆದೆ ಎಂದಾ
ನೈವೇದ್ಯಕೆಲ್ಲಣಿಯಾಗಿದೆ ಯಶೋದೆ ನೋಡು ಬಾ ಎಂದು ಕರೆದ||2|| ||ಕೋಲು||

ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ ಒಬ್ಬಂತೆ ತಾ ನಿಂತ
ಜಜ್ಜಿಡೆರೆ ತಿಂದು ದೂರ ಹೋಗಿ ನಿಂತು ಹಬ್ಬವು ಏನೆಂದ
ಒಬ್ಬನೆ ತಿಂದು ಒಳಗಿದ್ದವರಿಗೆ ಜಿಬ್ಬನು ತೋರಿಸಿದ
ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ ಅಜ್ಜನ ಮಗನೆಂದಾ||2|| ||ಕೋಲು||

ಉಪ್ಪು ಸಾಕು ಸಾಲದು ನೋಡೆನೆ ಅಪ್ಪಟವನೆ ಮೆದ್ದ
ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ ನಿಮ್ಮಪ್ಪನ ಮಗನೆಂದಾ
ಧಿಮಿ ಧಿಮಿ ಮಳ್ಳಿಗೆ ,ಧಿಮಾಕು ಜಾಜಿಗೆ ಕೋಲಣ್ಣಾ ಕೋಲ
ರಾಮನ‌ ನೆಂಟ ಭೀಮೇಶ ಕ್ರಷ್ಣಕೋಲಣ್ಣ ಕೋಲ ಕೋಲಣ್ಣ ಕೋಲ||ಕೋಲು||

Kolu Krishna saagara shayana kolanna kola |
saaligramake haalabhisheka kolanna kola kollanna kola || kolu ||

Attada melina nelavallaadisi sakkaregala savida |
krishna krishna nanendare bekkeno endaa
Bekkendoduta orolagidda hakkigalodisida,
makkalu malagyarebisabedene battalu baarisida ||kolu||

Happala sandige haravida maneyali tappade taa poda |
muchidabyadi muttuvanalla appantavanalla ||
Saarida maneyali sunnava chelli dhulanu haravida |
kaalali rangoli haakide yashode not nodu baa endu kareda ||kolu ||

Abhishekakenda arghyodaka tandare aachamana maadida |
preetiyinda mantraakshyate ettare, shri tulasiya taa mudida |
Nyvedhyakendu amritanna msadalu baayterede endaa,
nyvedhyakellaniyaagide yashode nodu baa endu karedaa || kolu||

Kajjaya maaduva allige hogi obbante taa ninta |
jajjirede tindu doora hogi nintu habbavu enenda ||
Obbane tindu olagiddavari jibbanu torisida |
majjige kallana hidi hidi endare ajjana maganenda || kolu||

Uppu saaku saaladu nodene appatavane medda |
tuppada kallana hiding hidi endare, nimappana maganendaa |
Dhimi dhimi mallige, dhimaaku jaajige kolanna kola |
ramana nenta bhimesha krishnana kolanna kola kolanna kola || kolu ||

 

Leave a Reply

*

This site uses Akismet to reduce spam. Learn how your comment data is processed.