ನಿನ್ನ ಮಗನ ಲೂಟಿ ಘನವಮ್ಮ

ನಿನ್ನ ಮಗನ ಲೂಟಿ ಘನವಮ್ಮ
ಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||ಪ||
ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ |
ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ ||
ಕೋಲ ತಂದು ಹೊಡಿಯ ಹೋದರೆ ಓಡಿ ಪೋದನಮ್ಮ ||೧||
ಮೊಸರು ಮಾರುವಲ್ಲಿ ಇವನ ಗಾಳಿ ಘನವಮ್ಮ |
ಮೊಸರು ಮಾರುವವರು ಮೊರೆಯಿಡುವಾರಮ್ಮ ||
ಶಿಶುವಿನ ಕೈಯಲ್ಲಿ ಬೆಣ್ಣೆ ಉಳಿಗೊಡನಮ್ಮ |
ಶಶಿಮುಖಿಯರು ಹೀಗೆ ದೂರುವರಮ್ಮ ||೨||
ಊರೊಳು ಬರಲೀಸ ಕೇರಿಯೊಳು ಸುಳಿಯಲೀಸ |
ಈರೇಳು ಲೋಕಕ್ಕೆ ಒಡೆಯ ತಾನಂತೆ ||
ಧೀರಶ್ರಿ ಪುರಂದರ ವಿಠಲ ರಾಯನ |
ಕೇರಿ ಬಸವನ ಮಾಡಿಬಿಟ್ಟೆ ಗೋಪೆಮ್ಮ ||೩||

Ninna magana looTi ghanavamma
Karedu rangage buddhiya pElE gopemma ||pa||
hAlu kAyuvalli ivana gALi ghanavamma
kAlu tandu kElinoLage athi podanamma
kOla tandu Hodiya hOdare Odipodanamma ||1||
Mosaru maaruvalli ivana gALi ghanavamma
Mosaru mAruvavaru more iDuvAramma
ShiShuvina kaiyalli beNNe ooLigodanamma
ShaShimukhiyaru heege pELuvaramma ||2||
OoroLu baraleesa kEriyoLu suLiyaleesa
EerElu lokakke oDeya taanantE
Dheerasri Purandara Vithala Rayana
kEri basavana maaDibiTTe gOpemma ||3||

Leave a Reply

*

This site uses Akismet to reduce spam. Learn how your comment data is processed.